ಕಕ್ಕ1 : ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ ವಂಶದ ಅರಸರ ಮೂಲ ಪುರುಷರಲ್ಲಿ ಒಬ್ಬ. ಈತನ ಬಗ್ಗೆ ಇತಿಹಾಸದಲ್ಲಿ ವಿವರಗಳು ದೊರೆಯುವುದಿಲ್ಲ. ಇವನ ಆಳ್ವಿಕೆಯ ಕಾಲದ ಬಗ್ಗೆಯೂ ಖಚಿತವಾದ ಅಂಶಗಳು ಬೆಳಕಿಗೆ ಬಂದಿಲ್ಲ. ಈತ ಒಂದನೆಯ ಗೋವಿಂದರಾಜನ ಮಗ. ತನ್ನ ಪುರ್ವಿಕರಾದ ದಂತಿವರ್ಮ, ಒಂದನೆಯ ಇಂದ್ರ ಮತ್ತು ತಂದೆಯಾದ ಗೋವಿಂದರಾಜನಂತೆ ಬಾದಾಮಿ ಚಳುಕ್ಯರ ಮಾಂಡಲಿಕನಾಗಿ ರಾಜ್ಯಭಾರ ನಡೆಸಿರಬಹುದೆಂದು ಊಹಿಸಬಹುದು. ಈತ 8ನೆಯ ಶತಮಾನಕ್ಕೂ ಹಿಂದಿನವ. 	(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ